ಫಿಲೆಲ್ಭೋ ಪ್ರಾನ್ಸಿಸ್ಕೊ
	139-1481. ಇಟಲಿಯ ಮನುಷ್ಯ ದಾರ್ಶನಿಕ. ಆ ಶತಮಾನದ ಘನವಿದ್ವಾಂಸ. ಕಾನ್‍ಸ್ಟಾಂಟಿನೋಪಲ್ಲಿನಲ್ಲಿ ಗ್ರೀಕ್ ಭಾಷೆಯನ್ನು ಅಭ್ಯಸಿಸಿ ಗ್ರೀಕ್ ಗ್ರಂಥಗಳ ನೂರಾರು ಹಸ್ತಪತ್ರಿಗಳನ್ನು ಸಂಪಾದಿಸಿ ವೆನಿಸ್ಸಿಗೆ ಹಿಂದಿರುಗಿದ. ಪುರಾತನ ಸಾಹಿತ್ಯದ ಪುನರುಜ್ಜೀವನ ಕಾರ್ಯದಲ್ಲಿ ಅಮೋಘವಾದ ಪಾತ್ರವಹಿಸಿದ ಈತ ಅನೇಕ ವಿಡಂಬನ ಕಾವ್ಯಗಳನ್ನೂ ಪೆಟ್ರಾರ್ಕ್ ಕವಿಯ ಕಾನ್ಜೋನಿ ಗೀತಗಳನ್ನು ಕುರಿತು ವಿಮರ್ಶೆಯನ್ನೂ ಬರೆದ.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ